`ಮೈನಾ` ರೀ-ರೆಕಾರ್ಡಿಂಗ್ ಸಾಧು ಅವರ ನೇತೃತ್ವ
Posted date: 07 Mon, Jan 2013 ? 10:18:04 AM

ಸಮಸ್ತ ಕನ್ನಡಿಗರಿಗೆ ಒಪ್ಪುವಂತೆ ‘ಮೈನಾ’ ಚಿತ್ರವನ್ನೂ ನಿರ್ದೇಶಕ ನಾಗಶೇಖರ್ ಸಿಡ್ಡಪಡಿಸಿಕೊಳ್ಳುತ್ತಿದ್ದಾರೆ. ಇದು ಅವರ ತೃತೀಯ ನಿರ್ದೇಶನದ ಚಿತ್ರ. ಈ ಹಿಂದೆ ‘ಅರಮನೆ’ ಹಾಗೂ ‘ಸಂಜು ವೆಡ್ಸ್ ಗೀತಾ’ ಚಿತ್ರಗಳಿಂದ ಜಯಭೇರಿ ಹೊಡದ ನಿರ್ದೇಶಕರು ನಾಗಶೇಖರ್.

ಸಾಧು ಕೋಕಿಲ ಅವರ ಕೈಚಳಕದಿಂದ ರೀ-ರೆಕಾರ್ಡಿಂಗ್ ಕೆಲಸ ‘ಮೈನಾ’ ಚಿತ್ರಕ್ಕೆ ಪ್ರಾರಂಬವಾಗಿದ್ದು, ಡಿ.ಐ. ಹಾಗೂ ಮಿಕ್ಸಿಂಗ್ ಕೆಲಸಕ್ಕೆ ಸಿದ್ದವಾಗಿದ್ದು ಮೊದಲನೇ ಪ್ರತಿಯನ್ನು ಪಡೆಯಲು ಎದುರು ನೋಡುತ್ತಿದೆ ಚಿತ್ರ ತಂಡ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅರ್ಪಿಸುವ ಓಂಕಾರ್ ಮೊವೀಸ್ ‘ಮೈನಾ’ ನಿರ್ಮಾಪಕರು ರಾಜಕುಮಾರ್ (ವಜ್ರೆಶ್ವರಿ ಕುಮಾರ್). ಇದು ಟೈಗರ್ ಬಿ.ಬಿ. ಅಶೋಕ್ ಕುಮಾರ್ ಅವರ್ ವೃತ್ತಿ ಜೀವನದಲ್ಲಿ ಕಂಡುಬಂದ ಘಟನೆ ಆಧಾರಿತ ಚಿತ್ರ ಮುಖ್ಯವಾಗಿ ಭಾವನೆಗಳನ್ನೇ ಜೀವಳವಾಗಿ ಇಟ್ಟುಕೊಂಡಿರುವ ಕಥಾವಸ್ತು. ಕರ್ನಾಟಕದ ಅತೀ ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವ ನಿರ್ದೇಶಕರು ಪ್ರತಿಯೊಂದು ದೃಷ್ಯವು ಸುಂದರ ಎನ್ನುತ್ತಾರೆ.

ಹೆಸರಾಂತ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚೇತನ್ ಕುಮಾರ್ (ಆ ದಿನಗಳು ಖ್ಯಾತಿ) ಹಾಗೂ ನಿತ್ಯ ಮೆನನ್ ಪ್ರೇಮಿಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಎಲ್ಲರನ್ನು ಮನಸೂರೆಗೊಳ್ಳುವುದು ಖಂಡಿತ ಎನ್ನುವ ಅಭಿಪ್ರಾಯ ಚಿತ್ರತಂಡದಿಂದ ಕೇಳಿ ಬರುತ್ತಿದೆ. ಹಾಗೆಯೇ ಜಾಸ್ಸಿ ಗಿಫ್ಟ್ ಅವರ ರಾಗ ಸಂಯೋಜನೆಯಲ್ಲಿ ‘ಮೈನಾ ಮೈನಾ ನೀನೆ ನನ್ನ ಪ್ರಾಣ ಅನ್ನೋದಿಲ್ಲ ನನ್ನಾಣೆ..ಪ್ರಾಣ ಇಂದೆಲ್ಲ ನಾಳೆ ಹೋಗೋದೇನೆ..ನೀನಗೇನೂ ಅನಬೇಕೋ ನಾ ಕಾಣೆ....ಕೇಳುಗರ ಮನಗೆದ್ದಿದೆ. ಆನಂದ್ ಆಡಿಯೋ ಸಂಸ್ಥೆಯಿಂದ ಬಿಡುಗಡೆ ಆದ ‘ಮೈನಾ’ ಧ್ವನಿ ಸುರುಳಿ ಉತ್ತಮ ಪ್ರತಿಕ್ರಿಯೆಯನ್ನು ಮಾರುಕಟ್ಟೆಯಿಂದ ಪಡೆದುಕೊಳ್ಳುತ್ತಿದೆ.

ಜೋನಿ ಹರ್ಷ ಅವರ ಸಂಕಲನ, ರವಿ ವರ್ಮ ಅವರ ಸಾಹಸ, ಇಮ್ರಾನ್ ಸರ್ದಾರಿಯ ಅವರ ನೃತ್ಯ ನಿರ್ದೇಶನ, ಅರುಣ್ ಸಾಗರ್ ಅವರ ಕಲಾ ನಿರ್ದೇಶನ, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಗೀತ ಸಾಹಿತ್ಯ, ರಾಜನ್ ಅವರ ಸ್ಪೆಷಲ್ ಎಫ್ಫೆಕ್ಟ್ಸ, ಡಿಜಿಟಲ್ ಶ್ರೀನಾಥ್ ಅವರ ಸ್ಥಿರ ಚಿತ್ರಗಳು ‘ಮೈನಾ’ ಚಿತ್ರಕ್ಕೆ ಒದಗಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed